Latest News & Events

June 15 , 2026
  

ಬೆಂಗಳೂರಿನ ಅಖಿಲ ಹವ್ಯಕ ಮಹಾಸಭಾದ ಆಶ್ರಯದಲ್ಲಿ ಹುಬ್ಬಳ್ಳಿ-ಧಾರವಾಡ ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಸಹಯೋಗದಲ್ಲಿ ಇತ್ತೀಚೆಗೆ ಪ್ರತಿಭಾ ಶೋಧದ ಹಿನ್ನೆಲೆಯಲ್ಲಿ ಪ್ರಾಂತ ಮಟ್ಟದ " ಪ್ರತಿಬಿಂಬ" ಎಂಬ ಅಭೂತಪೂರ್ವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ಉತ್ತರ ಕರ್ನಾಟಕ ಪ್ರಾಂತದಿಂದ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಹವ್ಯಕ ಸಮುದಾಯದ ಜನರು ಮೇಳೈಸಿ ಕಾರ್ಯಕ್ರಮಕ್ಕೆ‌ ಮೆರಗು ನೀಡಿದರು. ಮಕ್ಕಳಿಗಾಗಿ ಆಶುಭಾಷಣ, ಚಿತ್ರಕಲೆ, ಏಕಪಾತ್ರಾಭಿನಯ, ಹಾಡು ಫ್ಯಾನ್ಸಿ ಡ್ರೆಸ್ ಮೊದಲಾದ ಸ್ಪರ್ಧೆಗಳನ್ನು ಏರ್ಪಡಿಸಿದ್ದರೆ ಹಿರಿಯರಿಗಾಗಿ ಜಾನಪದ ಹಾಡು, ಹವ್ಯಕ ಭಾಷೆಯಲ್ಲಿ ಆಶು‌ಭಾಷಣ ಮೊದಲಾದ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ‌ ಆರು ಹವ್ಯಕ ಸಾಧಕರಿಗೆ ಸನ್ಮಾನಿಲಾಯಿತು. ಪತ್ರಿಕಾ ರಂಗದಲ್ಲಿ ಸಾಧನೆ‌ಮಾಡಿದ ಸಂಯುಕ್ತ ಕರ್ನಾಟಕದ‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೋಹನ‌ ಹೆಗಡೆ, ಸಾಹಿತ್ಯದಲ್ಲಿ ಸಾಧನೆ ಮಾಡಿದ ಅರುಣಕುಮಾರ ಹಬ್ಬು, ಉದ್ಯಮ‌ ಕ್ಷೇತ್ರದಲ್ಲಿ ಸಾಧನೆ ಮಾಡಿದ ಆರ್. ಕೆ. ಹೆಗಡೆ, ಯಕ್ಷಗಾನದಲ್ಲಿ ಅಪಾರ ಸೇವೆ ಸಲ್ಲಿಸಿದ ಆರ್.ಜಿ. ಭಟ್ ವರ್ಗಾಸುರ, ಶಿಕ್ಷಣ ಕ್ಷೇತ್ರದಲ್ಲಿ ಮಂಗಲಾ ಭಟ್ ಮತ್ತು ಗೋ ಸೇವೆಗಾಗಿ ದತ್ತಾತ್ರೆಯ ಭಟ್ ಅವರಿಗೆ "ಹವ್ಯಕ ಸಾಧಕ" ಪ್ರಶಸ್ತಿ ನೀಡಿ ಗೌರವಿಸಲಾಯಿತು.

  


ಅಖಿಲ ಹವ್ಯಕ ಮಹಾ ಸಭಾದ ಅಧ್ಯಕ್ಷ ಡಾ.ಗಿರಿಧರ ಕಜೆಯವರು ಮುಖ್ಯ ಅತಿಥಿಯಾಗಿ ಆಗಮಿಸಿ ಈ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗುವುದರ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿ ಹವ್ಯಕರಲ್ಲಿ ಒಗ್ಗಟ್ಟು ಅತಿ ಅಗತ್ಯವಾಗಿದ್ದು ಇದರಿಂದ ಹವ್ಯಕ ಸಮುದಾಯದ ಸರ್ವಾಂಗೀಣ ಪ್ರಗತಿ ಸಾಧ್ಯವಾಗುತ್ತದೆ ಎಂದರು.
ಹವ್ಯಕ ಸಮುದಾಯ ಉನ್ನತ ಸಂಸ್ಕೃತಿ ಹೊಂದಿದ್ದು ಕಾಲ ಕಳೆದಂತೆ ಹವ್ಯಕ ಯುವಕರು ಉದ್ಯೋಗಾಕಾಂಕ್ಷಿಗಳಾಗಿ ಬೇರೆ ಬೇರೆ ಐರು, ಪ್ರದೇಶ, ವಿದೇಶಗಳಲ್ಲಿ ಚದುರಿ ಹೋಗಿದ್ದಾರೆ. ಇದರಿಂದ ಗ್ರಾಮೀಣ ಹವ್ಯಕರ ಪರಿಸ್ಥಿತಿ ದಾರುಣವಾಗಿದೆ. ಈ ನಿಟ್ಟಿನಲ್ಲಿ ಹವ್ಯಕರು ಒಗ್ಗಟ್ಟು ಸಾಧಿಸಿ ಸಮಸ್ಯೆ ನಿವಾರಣೆಗೆ ಶ್ರಮಿಸಬೇಕಾಗಿದೆ. ಸುಶಿಕ್ಷಿತರಾಗಿ ಹೊರ ಹೋಗಿರುವ ಯುವಕರು ಈ ಸಮಸ್ಯೆ ನಿವಾರಣೆಯಲ್ಲಿ ಸಕ್ರಿಯ ಪಾತ್ರ ವಹಿಸಬೇಕಾಗಿ ಸಲಹೆ ಮಾಡಿದರು.
ಮುಖ್ಯ ಅಥಿತಿಯಾಗಿ ಆಗಮಿಸಿದ ಉದ್ಯಮಿ ಶಿವರಾಮ‌ ಹೆಗಡೆ ಆಗಮಿಸಿ ಹವ್ಯಕರ ಸಾಂಸ್ಕೃತಿಕ ಹಿರಿಮೆಯನ್ನು ಪ್ರಶಂಸಿಸಿದರು. ವೇದಿಕೆಯ ಮೇಲೆ ಅನಿತಾ ವಸಂತ ಭಟ್, ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಗೌರವ ಕಾರ್ಯದರ್ಶಿ ಸುದರ್ಶನ ಜಿ.ಎಚ್, ವಸಂತ ಭಟ್, ಕಾರ್ಯಕ್ರಮದ ಸಂಚಾಲಕ ಮೂರ್ತಿ ಹೆಗಡೆ, ವೀಣಾ ಹೆಗಡೆ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ರೂವಾರಿ ಹಾಗೂ ಅಖಿಲ ಹವ್ಯಕ ಮಹಾಸಭಾದ ನಿರ್ದೇಶಕ ಶ್ರೀಕಾಂತ ಭಟ್ ಸರ್ವರಿಗೂ ಸ್ವಾಗತಿಸಿದರು. ಸರಿಗಮಪ ಖ್ಯಾತಿಯ ದಿವ್ಯಾ ಹೆಗಡೆ ಹಾಡಿ ಜನರನ್ನು ರಂಜಿಸಿದರು.ಯಕ್ಷಗಾನ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆಯವರ "ಸುಧನ್ವಾರ್ಜುನ ಕಾಳಗ ಯಕ್ಷಗಾನವನ್ನು ಪ್ರಸ್ತುತಪಡಿಸಲಾಯಿತು.
ವಿವಿದ ಸ್ಪರ್ಧೆಗಳು ಹಾಗೂ ಹವ್ಯಕರ ವಿಶೇಷ ಸಿಹಿ ತಿಂಡಿಯಾದ ಧಾನ್ಯಗಳ‌ಮಣ್ಣಿ ಮತ್ತು ಹಲ್ವಾಗಳು ಮತ್ತು ಕರಕುಶಲ ವಸ್ತು ಪ್ರದರ್ಶನ ನಡೆಯಿತು.
ಇದೇ ಸಂದರ್ಭದಲ್ಲಿ ಹುಬ್ಬಳ್ಳಿ ಮತ್ತು ಧಾರವಾಡ ಮಹಿಳಾ‌ ಮಂಡಳದ ಉದ್ಘಾಟನೆಯೂ ನಡೆಯಿತು

 




ಶಿಕ್ಷಣದ ಜೊತೆ ಸಂಸ್ಕಾರ‌ ಮುಖ್ಯ: ಸ್ವರ್ಣವಲ್ಲಿ ಶ್ರೀ

ಹುಬ್ಬಳ್ಳಿ: ಶಿಕ್ಷಣದ ಜೊತೆ ಮಕ್ಕಳಿಗೆ ಉತ್ತಮ ಸಂಸ್ಕಾರ‌ ನೀಡುವುದು ಅಷ್ಟೇ ಮುಖ್ಯ ಎಂದು ಸೋಂದಾ ಸ್ವರ್ಣವಲ್ಲಿ ಸಂಸ್ಥಾನ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಇಂದು ಇಲ್ಲಿ ನುಡಿದರು.
ಇಲ್ಲಿಯ ಹವ್ಯಕ ಭವನದಲ್ಲಿ ಸಮಾವೇಶಗೊಂಡಿದ್ದ ಹವ್ಯಕ ಸಮುದಾಯದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು ಇಂದು ಆಧುನಿಕ ಶಿಕ್ಷಣಕ್ಕೇ ಮಹತ್ವ ನೀಡಿ ಸಂಸ್ಕಾರವನ್ನು ಕಡೆಗಣಿಸುತ್ತಿರುವುದರಿಂದ ಅನೇಕ ಸಾಮಾಜಿಕ ಸಮಸ್ಯೆಗಳು ಉಂಟಾಗುತ್ತಿವೆ ಎಂದು ವಿಷಾದಿಸಿ ಸಂಸ್ಕಾರವಿಲ್ಲದಿದ್ದರೆ ಅಂಥ ಶಿಕ್ಷಣಕ್ಕೆ ನೈತಿಕ‌ ಮೌಲ್ಯವಿರುವುದಿಲ್ಲವೆಂದರು.
ಹವ್ಯಕರಲ್ಲಿ ಉದ್ಭವಿಸಿದ ವೈವಾಹಿಕ ಸಮಸ್ಯೆಗಳಿಂದಾಗಿ ಅನೇಕ‌ ಯುವಕರು ವಿವಾಹ ವಂಚಿತರಾಗಿ ಒಂಟಿ ಬಾಳನ್ನು ಬಾಳಬೇಕಾಗಿದೆ. ಸಮಾಜದಲ್ಲಿ‌ ವಿಚ್ಛೇದನಗಳಾಗುತ್ತಿರುವುದು ಆತಂತಕಾರಿಯಾಗಿದೆ. ಈ ಸಮಸ್ಯೆಗಳಿಗೆಲ್ಲ ಸೂಕ್ತ ಸಂಸ್ಕಾರದ ಅರಿವಿನ ಕೊರತೆಯೇ ಕಾರಣವೆಂದರು.

 

  


ಈ‌ ನಿಟ್ಟಿನಲ್ಲ ಸ್ವರ್ಣವಲ್ಲಿ ಮಠ ಸಮಸ್ಯೆ‌ ನಿವಾರಣೆಗೆ ಅನೇಕ ಪರಿಹಾರೋಪಾಯಗಳನ್ನು ಅನುಷ್ಠಾನಕ್ಕೆ ತರುವ ಪ್ರಯತ್ನ ಮಾಡುತ್ತಿದೆ ಎಂದರು.
ಮನುಷ್ಯ ತನ್ನಲ್ಲಿ ನೈತಿಕ ಮೌಲ್ಯಗಳನ್ನು ಹೆಚ್ಚು ಅಳವಡಿಸಿಕೊಳ್ಳಲು ಮಠದ ಗುರುಗಳ‌ಮಾರ್ಗದರ್ಶನ ಪಡೆಯುವುದು ಅಗತ್ಯವೆಂದರು.
ಹವ್ಯಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ವಿ.ಎಂ.ಭಟ್ ಸ್ವಾಗತಿಸಿದರು. ಸಂಸ್ಥೆಯ‌ ಉಪಾಧ್ಯ್ಷಶ್ರೀಕಾಂತ ಹೆಗಡೆ, ವಸಂತ್ ಭಟ್, ಜಿ.ಕೆ. ಹೆಗಡೆ, ಗೌರವ ಕಾರ್ಯದರ್ಶಿ ಸುದರ್ಶನ ಜಿ.ಎಚ್ ಮೊದಲಾದವರು ಉಪಸ್ಥಿತರಿದ್ದರು.

.


 

Havyak Bhavan

It is having all the amenities to do everytype of functions